೨೦೧೧ರ ಜನಗಣತಿ ಪ್ರಕಾರವಾಗಿ ಪಂಜಾಬಿನ ಜನಸಂಖ್ಯೆ ೨ ಕೋಟಿ ೭೭ ಲಕ್ಷ. (೨೭.೭ ಮಿಲಿಯನ್) ಸಿಖ್ ಧರ್ಮವು ಅತಿ ಹೆಚ್ಚಿನ ಪ್ರಚಲಿತ ಧರ್ಮವಾಗಿದ್ದು ಸುಮಾರು ೫೮% ಜನರು ಅದರ ಅನುಯಾಯಿಗಳಿದ್ದಾರೆ. ಸುಮಾರು ೩೮% ಜನ ಹಿಂದೂ ಧರ್ಮೀಯರಿದ್ದಾರೆ. ಇಸ್ಲಾಂ, ಕ್ರೈಸ್ತ, ಬೌದ್ಧ ಹಾಗೂ ಜೈನ ಮತಗಳ ಜನರೂ ಕೂಡ ಇದ್ದಾರೆ. ಗುರುಮುಖಿ ಲಿಪಿಯಲ್ಲಿ ಬರೆಯಲ್ಪಡುವ ಪಂಜಾಬಿ ಭಾಷೆ ಪಂಜಾಬಿನ ಅಧಿಕೃತ ಭಾಷೆಯಾಗಿದೆ. 'ಮಲೇರ್ಕೋಟ್ಲಾ' ಎಂಬ ಪಟ್ಟಣವು ಮುಸ್ಲಿಂಬಾಹುಳ್ಯದ ಪಟ್ಟಣವಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ವಲಸೆ ಬಂದಿರುವ ಮುಸ್ಲಿಂ ಜನಾಂಗದ ಕೆಲಸಗಾರರಿಂದಾಗಿ ಪಂಜಾಬಿನಲ್ಲಿ ಮುಸ್ಲಿಂ ಜನಸಂಖ್ಯೆಯು ೧.೯೩% ಅಷ್ಟು ಹೆಚ್ಚಳವಾಗಿದೆ. == ಉಲ್ಲೇಖಗಳು ==